KGF – Chapter 1

KGF Poster

ಕೆ.ಜಿ.ಎಫ್. ಅಧ್ಯಾಯ ೧ ಚಿತ್ರ ವಿಮರ್ಶೆ

ಗಂಧದ ಗುಡಿಯಲ್ಲಿ ಚಿನ್ನದ ಗಣಿಯನ್ನು ಸೃಷ್ಟಿಸಿದ ಅದ್ದೂರಿ ಚಿತ್ರ!

ರೇಟಿಂಗ್: ೫/೫

ಮಾಳವಿಕಾ ಅವಿನಾಶ್ ಅವರು ಒಬ್ಬಳು ಪತ್ರಕರ್ತೆಯಾಗಿದ್ದು, ಅನಂತನಾಗ್ ಅವರು ಕೆಜಿಎಫ್ ಬಗ್ಗೆ ಅವರಿಗೆ ಹೇಳುವ ಕಥೆಯ ಮೂಲಕ ಈ ಚಿತ್ರದ ಕಥೆ ಶುರುವಾಗುತ್ತದೆ. ರಾಕಿ ಎಂಬ ಹುಡುಗ ಬಾಂಬೆಯ ಗಲ್ಲಿಗಳಲ್ಲಿ ದೊಡ್ಡವನಾಗಿ, ಅನಂತರ ಕೋಲಾರದ ಚಿನ್ನದ ಗಣಿಯಲ್ಲಿ ಪ್ರವೇಶ ಮಾಡಿ ಅಲ್ಲಿನ ಗುಲಾಮನಾಗಿ ಏನೆಲ್ಲಾ ಮಾಡುತ್ತಾನೆ ಎಂದು ಈ ಚಿತ್ರದಲ್ಲಿ ನೋಡಬಹುದು. ಚಿತ್ರದ ಕಥೆಯು ತುಂಬಾ ಕೂತೂಹಲಕಾರಿಯಾಗಿದ್ದು, ಯಶ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅವರ ಹೇರ್ ಸ್ಟೈಲ್, ಲುಕ್ಸ್ ಹಾಗೂ ಫೈಟ್ ಸೀನ್ಸ್ ಈ ಚಿತ್ರದ ಮುಖ್ಯ ವೈಶಿಷ್ಟ್ಯವಾಗಿದೆ. ಪ್ರಶಾಂತ್ ನೀಲ್ ಅವರು ಅತ್ಯುನ್ನತವಾಗಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಿಗೂಢ ಛಾಯಾಗ್ರಹಣ ತುಂಬಾ ರೋಮಾಂಚಕವಾಗಿದ್ದು ಪ್ರೇಕ್ಷಕರ ಗಮನ ಸೆಳೆಯುತ್ತದೆ. ರವಿ ಬಸ್ರೂರ್ ಅವರ ಸಂಗೀತಕ್ಕೆ ವಿಶೇಷ ಉಲ್ಲೇಖನೆಯನ್ನು ಕೊಡಬೇಕು. ಏಕೆಂದರೆ ಅವರ ಸಂಗೀತವು ಅತ್ಯಾಧುನಿಕವಾಗಿದ್ದು, ಹಲವಾರು ಸಂಧರ್ಭಗಳಲ್ಲಿ ಮೈ ಝಂ ಎನ್ನುವಂತೆ ಮಾಡುತ್ತದೆ ಹಾಗೂ ಚಿತ್ರಕ್ಕೆ ಜೀವಂತಿಕೆಯನ್ನು ಕೊಡುತ್ತದೆ. ಎಲ್ಲಾ ಹಾಡುಗಳು ಅತ್ತ್ಯುತ್ತಮವಾಗಿ ಇದ್ದು, ಕೇಳುಗರ ಭಾವಕೋಶವನ್ನು ಸ್ಪರ್ಶಿಸುತ್ತದೆ! ಈ ಚಿತ್ರವು ಕನ್ನಡ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ!

KGF Chapter 1 Movie Review

KGF strikes a Golden haul for Sandalwood!

Rating: 5/5

The story begins with Anant Nag unveiling the secret story of Kolar Gold Fields to a journalist Malavika Avinash. Growing up on the streets of Mumbai, Rocky goes to the blood ravaged mine fields of Kolara in Karnataka as a slave, and goes on to take control. Yash has acted very maturely throughout the movie. His hairstyle, looks and fighting scenes are the striking features of the film. The cinematography is realistic, whether it is the dark boold ravaged fields of Kolara or the nightlife in Mumbai & Bengaluru, it will definitely impress the viewer. Prashanth Neel has directed the movie brilliantly. Ravi Basrur’s music deserves a special mention. The music is very sophisticated and also gives liveliness to the film. All the songs give you goosebumps when you listen to it! This film takes Sandalwood to almost close to the level of Hollywood and is bound to make a mark across Indian cinema!

1 thought on “KGF – Chapter 1

Leave a comment

Design a site like this with WordPress.com
Get started
search previous next tag category expand menu location phone mail time cart zoom edit close