ಬೆಲ್ ಬಾಟಮ್ – ಚಿತ್ರ ವಿಮರ್ಶೆ

ಒಂದು ಆನಂದಮಯ ರೆಟ್ರೋ ಹಾಸ್ಯ ಕ್ರೈಂ ಥ್ರಿಲ್ಲರ್!

ರೇಟಿಂಗ್: ೪/೫

1550215780_bell-bottom-poster

ಡಿಫೆ(ಟೆ)ಕ್ಟಿವ್ ದಿವಾಕರ (ರಿಷಬ್ ಶೆಟ್ಟಿ), ಒಬ್ಬ ಆಕಾಂಕ್ಷಿ ಪತ್ತೇದಾರಿ. ಆತನಿಗೆ ಕ್ರೈಂ ಕಾದಂಬರಿಗಳು ಹಾಗೂ ಕ್ರೈಂ ಚಲನಚಿತ್ರಗಳನ್ನು ನೋಡುವುದರಲ್ಲಿ ತುಂಬಾ ಆಸಕ್ತಿ. ಅವನ ತಂದೆಯು ಅವನನ್ನು ಪೊಲೀಸ ಆಗುವಂತೆ ಪೀಡಿಸುತ್ತಾರೆ. ಕೊನೆಗೂ ದಿವಾಕರ ತನ್ನ ಹಿರಿಯ ಅಧಿಕಾರಿಗಳು ಹೇಳುವಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಆಗುತ್ತಾನೆ. ತನಗೆ ನಿಯೋಜಿಸಿದ್ದ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಕಂಡುಹಿಡಿದ ಮೇಲೆ, ಸುತ್ತಲಿನ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಆಗುವ ಕಳ್ಳತನದ ಪ್ರಕರಣವನ್ನು ಡಿಟೆಕ್ಟಿವ್ ದಿವಾಕರನಿಗೆ ಆಯೋಜಿಸಲಾಗುತ್ತದೆ. ಈ ಪ್ರಕರಣವನ್ನು ಡಿಟೆಕ್ಟಿವ್ ದಿವಾಕರ ಹೇಗೆ ಪರಿಹರಿಸುತ್ತಾನೆ ಎಂಬುದು ಚಿತ್ರದಲ್ಲಿ ಮುಖ್ಯವಾಗಿ ತೋರಿಸಲಾಗಿದೆ. ಚಿತ್ರದ ಕಥಾವಸ್ತು ತುಂಬಾ ಕುತೂಹಲಕಾರಿಯಾಗಿದ್ದು ಪ್ರೇಕ್ಷಕನಿಗೆ ನಕ್ಕು ನಕ್ಕು ಹೊಟ್ಟೆ ನೋವು ಬರಿಸುವಂತೆ ಸಂಭಾಷಣೆಗಳಿವೆ. ಚಿತ್ರದ ಛಾಯಾಗ್ರಹಣ ಅದ್ಭುತವಾಗಿದ್ದು ಪ್ರೇಕ್ಷಕರನ್ನು ೮೦ ರ ದಶಕಕ್ಕೆ ಕೊಂಡೊಯ್ಯುತ್ತದೆ. ರಿಷಬ್ ಹಾಗೂ ಹರಿಪ್ರಿಯಾ ಅವರ ಪ್ರೀತಿ ರೋಮಾಂಚನ ಹಾಗೂ ಹಾಡು ನಿಮ್ಮನ್ನು ಮನೋರಂಜಿಸುತ್ತದೆ. ಪ್ರಕಾಶ್ ತುಮಿನಾಡು, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಚಿತ್ರದಲ್ಲಿ ನಟಿಸಿರುವಂತಹ ಬೇರೆಲ್ಲಾ ಕಲಾವಿದರು ಉನ್ನತವಾಗಿ ನಟಿಸಿದ್ದಾರೆ. ಚಿತ್ರದ ಎರಡನೇ ಭಾಗವು ಸ್ವಲ್ಪ ನಿಧಾನ ಗತಿಯಲ್ಲಿ ಹೋಗುತ್ತದೆ. ಆದರೆ ಕೊನೆಯಲ್ಲಿನ ಕ್ಲೈಮ್ಯಾಕ್ಸ್ ತುಂಬಾ ಕುತೂಹಲಕಾರಿಯಾಗಿದ್ದು ಪ್ರೇಕ್ಷಕನ ಗಮನಸೆಳೆಯುತ್ತದೆ!

Categories Sandalwood

Leave a comment

Design a site like this with WordPress.com
Get started
search previous next tag category expand menu location phone mail time cart zoom edit close